
ಸಾಂಗತ್ಯ ಬೆಂಗಳೂರು ಚಿತ್ರೋತ್ಸವದ ಸರಣಿಯಲ್ಲಿ ಪ್ರಕಟಿಸುತ್ತಿರುವ ಲೇಖನವಿದು. ಇಂದಿನಿಂದ ವಿವಿಧ ವಿಭಾಗಗಳಲ್ಲಿ ಚಿತ್ರ ಪ್ರದರ್ಶನ ಆರಂಭ. ಈ ಹಿನ್ನೆಲೆಯಲ್ಲಿ ಸಿನಿಮಾಸಕ್ತರಿಗೆ ಅನುಕೂಲವಾಗುವಂತೆ ಮಾಸ್ಟರ್ಸ್ ಸಿನಿಮಾ ಮತ್ತು ಪುನರಾವಲೋಕನ ವಿಭಾಗದಡಿ ಪ್ರದರ್ಶಿತವಾಗುತ್ತಿರುವ ಚಿತ್ರಗಳ ನಿರ್ದೇಶಕರು, ನಟರ ಪರಿಚಯ ಕುರಿತ ಲೇಖನವಿದು.
ಹೆನ್ರಿ ಜಾರ್ಜಸ್ ಕ್ಲೌಟ್(1907-1977)
ಹೆನ್ರಿ ಜಾರ್ಜಸ್ ಕ್ಲೌಟ್ ಫ್ರೆಂಚ್ ಚಿತ್ರ ನಿರ್ದೇಶಕ. ಚಿತ್ರ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಪ್ರಯತ್ನಗಳನ್ನು ಮಾಡಿದ ಹೆನ್ರಿ, ಬಹಳ ಪ್ರಸಿದ್ದವಾದುದು ತನ್ನ ಥ್ರಿಲ್ಲರ್ ಸಿನಿಮಾಗಳಿಂದ. ದಿ ವೇಜಸ್ ಆಫ್ ಫಿಯರ್ ಮತ್ತು ಲೆಸ್ ಡೈಬೊಲಿಕಾಸ್ ಚಿತ್ರಗಳಂತೂ ಹೆನ್ರಿಗೆ ಸಾಕಷ್ಟು ಕೀರ್ತಿ ತಂದುಕೊಟ್ಟಿತು. ಸಿನಿಮಾಸಕ್ತರಿಂದ ಮತ್ತು ವಿಮರ್ಶಕರಿಂದ ಪ್ರಶಂಸೆಗೊಳಗಾದ ಇವೆರಡೂ ಚಿತ್ರಗಳು 1950 ರ ದಶಕದ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರಿವೆ.
ಹೆನ್ರಿ ಡಾಕ್ಯುಮೆಂಟರಿಗಳನ್ನೂ ನಿರ್ದೇಶಿಸಿದ್ದಾರೆ. ಖ್ಯಾತ ಕಲಾವಿದ ಪಿಕಾಸೊ ಕುರಿತಂತೆ ದಿ...