Tuesday, December 11, 2012

ಚೆನೈ ಚಿತ್ರೋತ್ಸವಕ್ಕೆ ನಾಳೆ ಚಾಲನೆ


ಐಸಿಎಎಫ್ ಆಶ್ರಯದಲ್ಲಿ ನಡೆಯುವ ಚೆನ್ನೈ 10 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ನಾಳೆಯಿಂದ (ಡಿ.23) ಆರಂಭಗೊಳ್ಳಲಿದೆ.
ಡಿ. 20 ರವರೆಗೆ ನಡೆಯುವ ಉತ್ಸವದಲ್ಲಿ 160 ಚಲನಚಿತ್ರಗಳು ಪ್ರದರ್ಶಿತಗೊಳ್ಳಲಿವೆ. ಸುಮಾರು 45 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ.
header csif
ಟರ್ಕಿ, ಹಂಗೇರಿ ಮತ್ತು ಪೋಲ್ಯಾಂಡ್ ದೇಶದ ಪ್ರಮುಖ ಚಿತ್ರಗಳು "ಕಂಟ್ರಿ ಫೋಕಸ್" ವಿಭಾಗದಡಿ ಪ್ರದರ್ಶನಗೊಂಡರೆ, ಪುನರಾವಲೋಕನ (ರೆಟ್ರಾಸ್ಪೆಕ್ಟಿವ್) ವಿಭಾಗದಡಿ ತೈವಾನಿನ Hou Hsao-Hsien ಫಿನ್ ಲ್ಯಾಂಡಿನ Aki Karasmaki ಯವರ, ಫ್ರಾನ್ಸ್ ನ CLAUDE CHABRO ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ತಮಿಳು ಚಿತ್ರಗಳ ಸ್ಪರ್ಧೆಯಡಿ 12 ಚಿತ್ರಗಳು ಪ್ರದರ್ಶನಗೊಂಡರೆ, ಭಾರತೀಯ ಪನೋರಮಾದಡಿ ಎಂಟು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಪೈಕಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ "ಕೂರ್ಮಾವತಾರ"ವೂ ಒಂದು. ಇದಲ್ಲದೇ ವಿಶ್ವ ಸಿನಿಮಾ, ಭಾರತೀಯ ಸಿನಿಮಾ ನೂರು- ಮೈಲಿಗಲ್ಲಾದ ಸಿನಿಮಾಗಳು-ಹೀಗೆ ಹಲವು ವಿಭಾಗಗಳಿವೆ. ಇದರೊಂದಿಗೆ ವಿವಿಧ ವಿಚಾರ ಸಂಕಿರಣಗಳು, ಸಂವಾದಗಳನ್ನೂ ಆಯೋಜಿಸಲಾಗಿದೆ.
ವುಡ್ ಲ್ಯಾಂಡ್ಸ್, ವುಡಲ್ಯಾಂಡ್ಸ್ ಸಿಂಫೋನಿ, ಐನಾಕ್ಸ್, ಸತ್ಯಂ, ರಾಣಿ ಸೀತಾ ಹಾಲ್ ಮತ್ತು ಕ್ಯಾಸಿನೋದಲ್ಲಿ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
amour
ಚಿತ್ರೋತ್ಸವದ ಆರಂಭದ ಚಿತ್ರವಾಗಿ ಮೈಕೆಲ್ ಹನಕೆ ಯವರ "ಲವ್" (ಅಮೋರ್) ಆಸ್ಟ್ರಿಯಾ ಚಿತ್ರ ಪ್ರದರ್ಶನಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ಸಂಗೀತ ಶಾಲೆಯ ವಿದ್ಯಾರ್ಥಿಗಳು ರಂಗನ್ನು ಹೆಚ್ಚಿಸಿದರೆ, ಸಮಾರೋಪ ಸಮಾರಂಭದಲ್ಲಿ ಹಿಂದಿಯ ಖ್ಯಾತ ನಟ ಅಮಿತಾಬ್ ಬಚ್ಚನ್ ಪಾಲ್ಗೊಳ್ಳುವರು. ಚಿತ್ರೋತ್ಸವಕ್ಕೆ ತಮಿಳುನಾಡು ಸರಕಾರ ಇದಕ್ಕಾಗಿ ವಿಶೇಷ ಅನುದಾನವನ್ನು ನೀಡಿದೆ.
ದೇಶ ವಿದೇಶದಿಂದ ಸುಮಾರು 20 ಕ್ಕೂ ಹೆಚ್ಚು ಮಂದಿ ಚಿತ್ರ ನಿರ್ದೇಶಕರು, ತಂತ್ರಜ್ಞರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದಿ ಹಿಂದು ಪತ್ರಿಕೆ ಪ್ರಾಯೋಜಿತ ಸಾಕ್ಷ್ಯಚಿತ್ರ ಸ್ಪರ್ಧೆಯೂ ನಡೆಯಲಿದೆ.
ವಿಶೇಷ ಪ್ರಶಸ್ತಿ
ಚೆನ್ನೈ ಚಿತ್ರೋತ್ಸವದಲ್ಲಿ ಬಹಳ ವಿಶೇಷವೆಂದರೆ, ಒಬ್ಬ ವಿಶೇಷ ಸಿನಿಮಾಸಕ್ತನನ್ನೂ ಪ್ರಶಸ್ತಿಗೆ ಆರಿಸಲಾಗುತ್ತದೆ. ಉತ್ಸವದಲ್ಲಿ ಅತಿ ಹೆಚ್ಚು ಸಿನಿಮಾ ನೋಡುವುದಲ್ಲದೇ, ತಾನು ನೋಡಿದ ಇತರೆ ಚಿತ್ರಗಳ ಬಗ್ಗೆ ನೂರು ಪದಗಳಿಗೆ ಮೀರದ ಒಂದು ಲೇಖನವನ್ನು ನೀಡಬೇಕು. ಇವೆಲ್ಲವನ್ನೂ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಇಂಡೋ ಸಿನಿ ಅಪ್ರಿಷಿಯೇಷನ್ ಫೌಂಡೇಷನ್ (ICEF) ನೋಂದಾಯಿತ ಫಿಲ್ಮ್ ಸೊಸೈಟಿ. 500 ಮಂದಿ ಸದಸ್ಯರನ್ನು ಹೊಂದಿರುವ ಇದು, 2003 ರಿಂದ ನಿರಂತರವಾಗಿ ಚಿತ್ರೋತ್ಸವಗಳನ್ನು ಸಂಘಟಿಸುತ್ತಿದೆ. ಚಿತ್ರೋತ್ಸವವಲ್ಲದೇ, ವರ್ಷ ಪೂರ್ತಿ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸುತ್ತಾ ಬರುತ್ತಿದೆ.

0 comments:

Post a Comment

Twitter Delicious Facebook Digg Stumbleupon Favorites More

 
Design by Free WordPress Themes | Bloggerized by Lasantha - Premium Blogger Themes | Grants For Single Moms