
ನಮ್ಮ ಕನ್ನಡದ ಬ್ಲಾಗ್ ನಲ್ಲಿ ಲಭ್ಯವಿರುವ ಲೇಖನಗಳನ್ನು ಇಲ್ಲೂ ಇನ್ನು ಮುಂದೆ ಪ್ರಕಟಗೊಳ್ಳಲಿವೆ. ಬ್ಲಾಗ್ ಸ್ಪಾಟ್ ನ ಓದುಗರಿಗೂ ಲಭ್ಯವಾಗಲೆಂಬ ದೃಷ್ಟಿಯಿಂದ ಈ ಕ್ರಮ. ದಯವಿಟ್ಟು ಸಹಕರಿಸಿ.ಸಂಡಾ. ಕೆ. ಶಿವರಾಮಕಾರಂತರು ಎಲ್ಲ ಕ್ಷೇತ್ರಗಳ ಬಗ್ಗೆಯೂ ತಮ್ಮ ನೋಟವನ್ನು ಹರಿಸಿದ್ದಾರೆ. ಅವರ ಆಸಕ್ತಿಯೇ ದಿಗಲು ಹುಟ್ಟಿಸುವಂಥದ್ದು. ಸಿನಿಮಾ ಕುರಿತು ಅವರು ಬರೆದ ಒಂದು ಲೇಖನ ನಮ್ಮನ್ನು ಹಲವು ದಿಕ್ಕುಗಳೆಡೆಗೆ ಆಲೋಚನಾಮುಖಿಯಾಗಲು ಪ್ರಚೋದಿಸುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ “ಕಲಾ ಪ್ರಬಂಧಗಳು” ಕುರಿತಾದ ಕೃತಿಯಿಂದ ಆಯ್ದದ್ದು ಇಲ್ಲಿ ಪ್ರಕಟಿಸಲಾಗುತ್ತಿದೆ. ಎಲ್ಲರೂ ಓದಿ ಅಭಿಪ್ರಾಯಿಸಿ.
ನಾವು ಬಯಸಲಿ ಬಯಸದಿರಲಿ, ಚಲನಚಿತ್ರ ಪ್ರದರ್ಶನ ಇಂದು ಜಗತ್ತಿನ ಉದ್ದಕ್ಕೂ ಪ್ರಚಾರಕ್ಕೆ ಬಂದಿದೆ. ಪೂರ್ವದಿಂದಲೂ ನಮ್ಮ ಸಂಸ್ಕೃತಿ ಯೊಡನೆ ಬೆರೆತು ಬಂದ ಕೆಲವು ಲಲಿತಕಲೆ ಗಳಷ್ಟೇ, ಎಷ್ಟೋ ಕಡೆ ಅವಕ್ಕಿಂತ ಅಡಕವಾದ ವ್ಯಾಮೋಹವನ್ನು ಅದು ನಮ್ಮಲ್ಲಿ ಉಂಟು ಮಾಡಿದೆ. ನಗರವಾಸಿಗಳಿಗೆ, ಚಲನಚಿತ್ರಗಳನ್ನು ಆಗಾಗ ನೋಡುವ ಚಟ ನಿತ್ಯಜೀವನದ...