
ಡ್ರಗ್ ಟ್ರಾಫಿಕಿಂಗ್ ಮತ್ತು ವುಮೆನ್ ಟ್ರಾಫಿಕಿಂಗ್ ಕುರಿತ ಹಲವು ಸಿನೆಮಾಗಳು ಹಾಲಿವುಡ್‌ನಲ್ಲಿ ತಯಾರಾಗಿವೆ. 2001ರಲ್ಲಿ ಬಂದ ಟ್ರಾಫಿಕ್ ಸಿನೆಮಾ ಕಲಾತ್ಮಕತೆಯಲ್ಲೂ ಮಿಂಚಿದ ಅಪರೂಪದ ಚಿತ್ರ. ಇದರಲ್ಲಿ ಡ್ರಗ್ ಕಥೆ ಇದೆ. ಹಲವರು ಇದನ್ನು ಸ್ಟೀವನ್ ಸೋಡೆರ್‌ಬಗ್‌ನ ಮಾಸ್ಟರ್‌ಪೀಸ್ ಎಂದೂ ಕರೆಯುತ್ತಾರೆ.ಕಳೆದ ವರ್ಷದ ಆರಂಭದಲ್ಲಿ ಬಂದ ಟೇಕನ್ ಸಿನೆಮಾವು ವುಮೆನ್ ಟ್ರಾಫಿಕಿಂಗ್ ಕುರಿತ ಅಕ್ಷನ್ ಮೂವೀ. ಲಿಯಾಮ್ ನೀಸನ್‌ನ ಲೀಲಾಜಾಲದ ನಟನೆ, ಅವನ ಸ್ಪಷ್ಟ ಡಯಲಾಗ್‌ಗಳು, ಸ್ಟಂಟ್‌ಗಳನ್ನು ನೋಡಲು, ಸಿನೆಮಾದ ಉದ್ದಕ್ಕೂ ಕೊಂಚ ವಿಪರೀತ ಎನ್ನಬಹುದಾದ ಗನ್ ಹಾರಾಟವನ್ನು ಅನುಭವಿಸಲು ಈ ಸಿನೆಮಾ ನೋಡಬಹುದು. ಸೆಮಿ ಅಕ್ಷನ್ ಮೂವೀ ಅಂತಲೂ ಇದನ್ನು ಕರೆಯುತ್ತಾರೆ. ಯಾಕೆಂದರೆ ಇಲ್ಲಿ ಅಪಹೃತ ಮಗಳನ್ನು ಸಂರಕ್ಷಿಸುವ ಭಾವುಕ ಕಥೆಯೂ ಇದೆ.ಮಕ್ಕಳು ಹೊರಗೆ ಹೋಗುವಾದ ಅದರಲ್ಲೂ ಪಿಕ್‌ನಿಕ್ ಮುಂತಾದ ಹೊರಸ್ಥಳಗಳ ಪ್ರವಾಸಕ್ಕೆ ಹೊರಟಾಗ ತಂದೆ ತಾಯಂದಿರು ದಿನಾ ರಾತ್ರಿ ಮೊಬೈಲ್ ಮಾಡು ಅಂತ ಹೇಳುವುದು ಇಂದು ಭಾರತದಲ್ಲೂ ಕಾಣಬಹುದಾದ ಸಹಜ ವರ್ತನೆ. ಇಲ್ಲೂ ಹೀಗೇ...